1.ವಿಕಲತೆಯುಳ್ಳ ವ್ಯಕ್ತಿಗಳಿಗಾಗಿ ಸಾಂಸ್ಕೃತಿಕ ಚಟುವಟಿಕೆ ಹಾಗೂ ಕ್ರೀಡೆಗಳ ಪ್ರೋತ್ಸಾಹದ ಯೋಜನೆ(ಸಾಧನೆ ಮತ್ತು ಪ್ರತಿಭೆ)
ವಿಕಲಚೇತನರು ನೀಡುವ ಸಾಂಸ್ಕೃತಿಕ ಚಟುವಟಿಕೆ ಹಾಗೂ ಕ್ರೀಡೆಗಳ ಪ್ರೋತ್ಸಾಹ ನೀಡಿ ಧನ ಸಹಾಯ ನೀಡುವ ಸಲುವಾಗಿ ಸಾಧನೆ ಪ್ರತಿಭೆಎಂಬ ಯೋಜನೆಯಡಿಯಲ್ಲಿ ಹಾಗೂ ವಿಕಲಚೇತನ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವಸಲುವಾಗಿ 2012-13ನೇ ಸಾಲಿನಲ್ಲಿ ರೂ. ಲಕ್ಷಗಳನ್ನು ವೆಚ್ಚಮಾಡಲಾಗಿದೆ ಮತ್ತು 144 ಫಲಾನುಭವಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆದಿರುತ್ತಾರೆ .
2. ವಿಕಲಚೇತನ ವ್ಯಕ್ತಿಗಳಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್
ಈ ಯೋಜನೆಯಡಿ ಸರ್ಕಾರವು ವಿಕಲತೆಯುಳ್ಳ ವ್ಯಕ್ತಿಗಳಿಗೆ ರಿಯಾಯಿತಿ ಬಸ್ ಪಾಸ್ ಗಳನ್ನು ನೀಡುತ್ತಿದೆ. ಈವರೆಗೆ ಎಲ್ಲಾ ಅರ್ಹ ಅಂಗವಿಕಲರಿಗೆ ರಿಯಾಯಿತಿ ಬಸ್ ಪಾಸುಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿತರಿಸಿರುತ್ತಾರೆ. ವಿಕಲಚೇತನರು ವಾರ್ಷಿಕವಾಗಿ ರೂ.550/-ಗಳನ್ನು ಪಾವತಿಸಬೇಕಾಗಿರುತ್ತದೆ.ಮತ್ತು 100ಕಿ.ಮೀ.ವರೆಗೆ ಪ್ರಯಾಣಿಸಬಹುದಾಗಿರುತ್ತದೆ.